ಇವರು 19 ಜನವರಿ 1991 ಜನಿಸಿದರು. ಇವರು ವನ್ಯಜೀವಿ ಛಾಯಾಗ್ರಾಹಕ ಮತ್ತು ಪರಿಸರವಾದಿಯಾಗಿದ್ದಾರೆ. ಇವರು 2013ರಲ್ಲಿ ನ್ಯಾಟ್ ಜಿಯೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದರೆ. ಅವರು ಏಷ್ಯನ್ ವೈನ್ ಎಂದು ಕರೆಯಲ್ಪಡುವ ಹಸಿರು ಬಳ್ಳಿ ಹಾವಿನ ಭಾವಚಿತ್ರಗಳ ವಿಭಾಗದಲ್ಲಿ ಮೊದಲ ಬಹುಮಾನವನ್ನು ಗೆದ್ದಿದ್ದಾರೆ.
ಇವರು ಛಾಯಾಚಿತ್ರಗಳಿಗೆ ಪುರಸ್ಕಾರಗಳನ್ನು ಸಹ ಪಡೆದಿದ್ದಾರೆ. ಇವರು ಪ್ರಮುಖ ಪರಿಸರವಾದಿಯಾಗಿದಾರೆ. ಇವರು ವನ್ಯಜೀವಿಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲು ಇಷ್ಟಪಡುತ್ತಾರೆ. ಇವರು ರೋಮಾಂಚಕ ,ವರ್ಣರಂಜಿತ, ಮತ್ತು ಸುಂದರವಾದ ಸೌಂದರ್ಯವನ್ನು ಕ್ಲಿಕ್ ಮಾಡಲು ತಿಳಿದಿರುತ್ತಾರೆ. ಇವರಿಗೆ ಬಾಲ್ಯದಿಂದಲೂ ಪ್ರಕೃತಿಯ ಮೇಲೆ ಪ್ರೀತಿ ಇತ್ತು.
ಅವರು ಲಂಡನ್ ನಲ್ಲಿದ್ದಾಗ ಒಂದು ಕ್ಯಾಮರಾವನ್ನು ತೆಗೆದುಕೊಂಡು ಪ್ರಯೋಗವನ್ನು ಪ್ರಾರಂಭಿಸಿದರು. ಗೂಗಲ್ ಮತ್ತು ಯೂಟ್ಯೂಬ್ ಸಹಾಯದಿಂದ ಫೋಟೋಗ್ರಫಿ ಕೌಶಲ್ಯವನ್ನು ಕಲಿತರು. ಮತ್ತು ಎಳು ದೇಶಗಳಲ್ಲಿ ವರುಣ್ ಆದಿತ್ಯ ಪ್ರಯಾಣಿಸಿದ್ದರು ಅಲ್ಲಿ ಸಿಕ್ಕಿರುವ ಪ್ರಾಣಿಗಳು, ಪಕ್ಷಿಗಳು, ಇತರೆಗಳು ಭಾವಚಿತ್ರವನ್ನು ತೆಗೆದಿದ್ದಾರೆ. ವರುಣ್ ಕ್ಲಿಕ್ ಮಾಡಿದ ವನ್ಯಜೀವಿ ಛಾಯಾಚಿತ್ರವನ್ನು ಸೈಟ್ ಗಳಲ್ಲಿ ಅಪ್ಲೋಡ್ ಮಾಡಲು ಶುರುಮಾಡಿದರು.


Leave a comment